Ananya Bhagat feat. Eesha Suchi - Doora Daari Songtexte

Songtexte Doora Daari - Ananya Bhagat , Eesha Suchi




ದೂರ (ದೂರ)
ದಾರಿ (ದಾರಿ)
ದೂರ ಸಾಗುತ
ದಾರಿ ದೂರ ಸವಾರಿ
ಗುರಿ ಇರದ ಯಾನ
ಗುರುತಿರದ ತಾಣ
ಕ್ಷಣ ಎಲ್ಲಾ ವಿಲೀನ
ತಿಳಿನೀಲಿ, ಗಗನ
ತೆಳು ಮೋಡ
ಮೋಡದ ಆಗಮನ
ಭಾವಕ್ಕೂ, ಸಿಲುಕದ ಕಥನ
ನಡುವಲ್ಲಿ ತೀರದ ಮೌನ
ಎಲ್ಲಿಯದೋ ಗಾಳಿ ಗಿಲ್ಲಿ
ಗಂಧದ ಆಲಿಂಗನವಂತೆ
ಬೆರೆತ ಜೀವಗಳಿಗೆ ಕಾಣುವ ಕನಸು ಒಂದೆಯಂತೆ
ಮಳೆ ಹನಿಯಾಗಿ ನೀನು ಬಂದು
ಮರು ಭೂಮಿಗೆ ಚೈತ್ತ್ರವ ತಂದು
ದಾರಿಗೆ ಹಸಿರಿನ ಸಿರಿ ತೋರಣ ನೀನೆ ಎಂದೇ ನಾನು
ಬೆಸುಗೆಯ ಸೂತ್ರವನು ಅರ್ಥೈಸಲಿ ಹೇಗೆ ವಿವರಿಸುತಾ
ಕಡದದ ಬಿಂಬ ಕಾಡುವ ನೆರಳ
ನಡುವಲ್ಲಿ ಸೋತಿರುವೆ
ಕಣ್ಣ್ಸೆಳೆಯುವ ಅಭಿಸಾರಿಕೆಯೇ
ಆರು ಬಿಂಬ ಒಂದೇ ರೂಪಕೆ
ಬಯಲಿನ ಎಲ್ಲೆಗಳ ಮೀರಿ
ಕಡಿವಾಣವಿಲ್ಲದ ಕುದುರೆ ಸವಾರಿ
ಕಣ್ಣ್ಸೆಳೆಯುವ ಅಭಿಸಾರಿಕೆಯೇ
ಆರು ಬಿಂಬ ಒಂದೇ ರೂಪಕೆ
ಹೇಳಲು ಪದವಿಲ್ಲ ಭಾವಕೆ (ಭಾವಕೆ)
ಮನದೊಳಗಿನ ದನಿಯು ನೀನು
ಪರಿತಪಿಸುವ ಸುಳಿಯು ನೀನು
ಸುಡುತಿರುವ ಒಡಲಿನ ಕಿಡಿಯು ನೀನು
ದೂರ (ದೂರ)
ದಾರಿ (ದಾರಿ)
ದೂರ ಸಾಗುತ
ದಾರಿ ದೂರ ಸವಾರಿ
ಗುರಿ ಇರದ ಯಾನ
ಗುರುತಿರದ ತಾಣ
ಕ್ಷಣ ಎಲ್ಲಾ ವಿಲೀನ
ದೂರ (ದೂರ)
ದಾರಿ (ದಾರಿ)
ದೂರ ಸಾಗುತ
ದಾರಿ ದೂರ ಸವಾರಿ



Autor(en): Pavan Kumar R, Udith Haritas



Attention! Feel free to leave feedback.