Ravi Shankar feat. Anup Bhandari & Inchara Rao - Gandaka Lyrics

Lyrics Gandaka - Ravi Shankar , Inchara Rao , Anup Bhandari




ಗಂಡಕವನ್ನು ಕಂದಕದಲ್ಲಿ ಕಂಡ ಕಥೆ ಬೇಕಾ
ಕಂಟಕ ಬಂದ ಮಂಡೂಕದ ಕರಂಡಕವೇ ಬೇಕಾ
ಬೊಂಕು ಡೊಂಕದ ಬಿಂಕದ ಕುದುರೆ
ಹಿಂದೆ ಕೊಂಕಣ ಮುಂಗಡೆ ಚದುರೆ
ಅಂಕು ಡೊಂಕಿದೆ ತೆಂಕಣ ಹಾರು
ಟಾಂಗು ಬಿಗಿದು ಚಂಗನೆ ಎದುರೇ
ನೀರು ಕುಡಿದ ಶೀಷೆಯ ಮೇಲೆ
ಇತ್ತು ವಿಜಯ ಮಲ್ಯನ ಮುದುರೆ
ಭದ್ರೆಯ ದಡದಲಿ ನಿದ್ರೆಯ ನಡುವಲಿ ಎದ್ದವನಂತೆ ಆಗಿದೆ
ಗಾಡಿಯು ನಿಂತರೂ ದಾರಿಯು ಮುಂದೆ ಸಾಗಿದೆ
ಹೂ ಕಾಡ ಪರಪಂಚ ದಿನವೆಲ್ಲವು ಕಾದಾಟ
ಆಟ ಸುಖಕಾಗಿ ಹುಡುಕಾಟ... ಓ...
ಗರಡಿಯೊಳಗೆ ಬರಿ ಕೊರಡುಂಟು ಏಕೆ ಬೇಕು ಒದೆಗೊರಡು?
ಉಜ್ಜುಗೊರಡಿಂದಾ ಕೆರೆತೆಗೆಯೋ ಲೋಕ ಕೊರೆದಾ ಪ್ರತಿ ಕರಡು
ಕಹಿಯೇ ಇರದ ಬಾಳೇ ಬರಡು
ಸಿಹಿಯ ಬೇಡೋ ಲೋಕ ಕುರುಡು
ಮುಂದೆ ಎರಡು ಬಾಳೆಲೆ ಹರಡು ಸಿಹಿಯೂ ಕಹಿಯೂ ಬೆರೆಯಲಿ
ಜಂಭವೇ ತುಂಬಿದ ಹುಂಬನ ಕಣ್ಣು ತೆರೆಯಲೀ...
ನಬ್ಬಟ್ಟಿಯಾ ಸವಾರಯ್ಯ
ಆತುರಗೆಟ್ಟ ಆಂಜನೇಯ ಹೇಳು
ಮದವೇರಿದಾ ಮದನಾರಿಯ ಕರೆದೊಯ್ಯುವ ದಾರಿಯಾ?
ಸುಳ್ಯ ದಾಟಿ ಸಂಪಾಜೆ
ಮಡಿಕೇರೀಲಿ ತಂಪಾದೆ
ಸುಂಟಿಕೊಪ್ಪ ಅಲೆದಾಡಿ
ಬೈಲುಕುಪ್ಪೆ ಕೆಂಪಾದೆ
ಕುಕ್ಕಡದೆದುರು ಎಕ್ಕಡ ತೆಗೆದು ಪಕ್ಕದ ಊರಿಗೆ ಚಲಿಸಿರುವೆ
ದಕ್ಕಡ ಇಲ್ಲದೇ ದಿಕ್ಕೆಲ್ಲಾ ಬೆಳಗಿರುವೇ
ನಿನ್ನ ನಗುವೇ ತಾರೆಯ ಮಿನುಗು
ನೀನು ಸೂಸೋ ಹೂವಿನ ಪುನುಗು
ಗುಡುಗುವ ಸಿಡಿಲೊಂದು ಬಡಿಯುವ ರಭಸಕೆ
ಮುಳುಗುವ ಹಡಗಂತಾದೇನು



Writer(s): Anup Bhandari



Attention! Feel free to leave feedback.