Kunal Ganjawala feat. Shreya Ghoshal - Iralare Cheluve paroles de chanson

paroles de chanson Iralare Cheluve - Shreya Ghoshal , Kunal Ganjawala




ಇರಲಾರೆ ಚೆಲುವೆ ಎಂದಿಗೂ ನಾ ನಿನ್ನ ಅಗಲಿ
ಕುಣಿದಾಡು ಬಾರೆ ನನ್ನಲಿ ಒಲವನ್ನು ಚೆಲ್ಲಿ
ಜೀವದಾಣೆ ಜನ್ಮದಾಣೆ
ನನ್ನ ಪ್ರೀತಿ ನಿನಗೆ ತಾನೇ
ಇರಲಾರೆ ಒಲವೆ ಎಂದಿಗೂ ನಾ ನಿನ್ನ ಅಗಲಿ
ಕುಣಿದಾಡುವಾಸೆ ನಿನ್ನಲಿ ನನ್ನನ್ನು ಚೆಲ್ಲಿ
ಜೀವದಾಣೆ ಜನ್ಮದಾಣೆ
ನನ್ನ ಪ್ರೀತಿ ನಿನಗೆ ತಾನೇ
ಇರಲಾರೆ ಚೆಲುವೆ ಎಂದಿಗೂ ನಾ ನಿನ್ನ ಅಗಲಿ
ನೀ ನನಗೊಲಿದ ಕ್ಷಣದಿಂದ
ಭೂಮಿಗೆ ಹಸಿರು ವರವಾಯ್ತು
ನಿನ್ನೊಡನಿರುವ ಸುಖಗಳಿಗೆ
ಮುಗಿಲಿಗೂ ಬಣ್ಣ ಬಂದಾಯ್ತು
ನೀ ನನಗೊಲಿದ ಕ್ಷಣದಿಂದ
ನನ್ನುಸಿರಿಗೂ ಜೀವ ಬಂದಾಯ್ತು
ನಿನ್ನೊಡನಿರುವ ಪ್ರತಿಕ್ಷಣವೂ
ಸ್ವರ್ಗವೇ ನನ್ನ ವಶವಾಯ್ತು
ಜೀವದಾಣೆ
ಜನ್ಮದಾಣೆ
ನನ್ನ ಪ್ರೀತಿ
ನೀನೇ ತಾನೇ
ಇರಲಾರೆ ಚೆಲುವೆ ಎಂದಿಗೂ ನಾ ನಿನ್ನ ಅಗಲಿ
ಇರಲಾರೆ ಒಲವೆ ಎಂದಿಗೂ ನಾ ನಿನ್ನ ಅಗಲಿ
ನಿನ್ನನು ಕಂಡ ದಿನದಿಂದ
ಲೋಕವೇ ನನಗೆ ಕಿರಿದಾಯ್ತು
ನಿನ್ನನು ಪಡೆದ ಕ್ಷಣದಿಂದ
ನಿತ್ಯವೂ ಹುಣ್ಣಿಮೆ ನನಗಾಯ್ತು
ಇದ್ದರೆ ನಿನ್ನೊಡನಿರಬೇಕು
ನಿರ್ಮಲ ಪ್ರೀತಿಯ ಸವಿಬೇಕು
ಇಬ್ಬರು ಹೀಗೆ ಬೆರಿಬೇಕು
ಸುಂದರ ಕವಿತೆಯ ಬರೀಬೇಕು
ಇರಲಾರೆ ಒಲವೆ ಎಂದಿಗೂ ನಾ ನಿನ್ನ ಅಗಲಿ
ಕುಣಿದಾಡು ಬಾರೆ ನನ್ನಲಿ ಒಲವನ್ನು ಚೆಲ್ಲಿ
ಜೀವದಾಣೆ
ಜನ್ಮದಾಣೆ
ನನ್ನ ಪ್ರೀತಿ
ನಿನಗೆ ತಾನೇ
ಇರಲಾರೆ ಚೆಲುವೆ ಎಂದಿಗೂ ನಾ ನಿನ್ನ ಅಗಲಿ
ಇರಲಾರೆ ಒಲವೆ ಎಂದಿಗೂ ನಾ ನಿನ್ನ ಅಗಲಿ



Writer(s): Mano Murthy, Narayan S



Attention! N'hésitez pas à laisser des commentaires.