S. P. Balasubrahmanyam feat. Vani Jairam - Endu Kaanada Belaka Kande текст песни

Текст песни Endu Kaanada Belaka Kande - S. P. Balasubrahmanyam , Vani Jayaram




ಸಂಗೀತ: ಸಿ.ಅಶ್ವಥ
ಸಾಹಿತ್ಯ: ದೊಡ್ಡರಂಗೇಗೌಡ
ಗಾಯನ: ಎಸ್.ಪಿ.ಬಿ. ಮತ್ತು ವಾಣಿಜಯರಾಮ್
(F) ಎಂದೂ ಕಾಣದ ಬೆಳಕ ಕಂಡೆ,
(F) ಎಂದೂ ಕಾಣದ ಬೆಳಕ ಕಂಡೆ,
ಒಂದು ನಲ್ಮೆ ಹೃದಯ ಕಂಡೆ
ನಿನ್ನಿಂದ ಬಾಳ ಮಧುರರಾಗ ಇಂದೂ ಮೂಡಿದೆ...
(M) ಎಂದೂ ಕಾಣದ ನಗೆಯಾ ಕಂಡೆ...
(M) ಎಂದೂ ಕಾಣದ ನಗೆಯಾ ಕಂಡೆ.
ಚಂಡಿ ಹುಡ್ಗಿ ಚೆಲುವಾ ಕಂಡೆ ಮಾವನ ಮಗಳು ಮನ
ಮೆಚ್ಚಿ ಬರಲು ಸ್ವರ್ಗಾನೆ ಸಿಕ್ಕೈತೇ...
ಎಂದೂ ಕಾಣದ ನಗೆಯಾ ಕಂಡೆ.
(F) ಕೆಡುವಾ ದಾರಿ ತುಳಿದಿರಲು
ಬಂದು ನೆಲೆ ಕಾಣಿಸಿದೆ
ನನ್ನ ತಪ್ಪು ನೂರಿರಲು ಮರೆತು
ನೀನು ಮನ್ನಿಸಿದೆ... ।।
(F) ಕೆಡುವಾ ದಾರಿ ತುಳಿದಿರಲು
ಬಂದು ನೆಲೆ ಕಾಣಿಸಿದೆ
ನನ್ನ ತಪ್ಪು ನೂರಿರಲು ಮರೆತು
ನೀನು ಮನ್ನಿಸಿದೆ... ।।
ಹೊಂಗನಸು ತುಂಬಿ ಬಂದು ಕಣ್ಣು
ತೆರೆಸಿದೆ ...ಎಂದೆದಿಗೂ ನಿನ್ನ ಜೊತೆ
ನಾನು ಬಾಳುವೆ. ನಾನು ಬಾಳುವೆ...
(M) ಎಂದೂ ಕಾಣದ ನಗೆಯಾ ಕಂಡೆ...
।। ಚಂಡಿ ಹುಡ್ಗಿ ಚೆಲುವಾ ಕಂಡೆ
ಮಾವನ ಮಗಳು ಮನ ಮೆಚ್ಚಿ ಬರಲು
ಸ್ವರ್ಗಾನೆ ಸಿಕ್ಕೈತೆ...
ಎಂದೂ ಕಾಣದ ನಗೆಯಾ ಕಂಡೆ.
(M) ಯಾವ್ದೇ ಕಷ್ಟ ಬರದಂಗೆ
ನೋಡ್ಕೊತೀನಿ ಹೂವಿನಂಗೇ
ಕೇಳು ನಿಂಗೆ ಬೇಕಾದಂಗೆ
ತಂದಕೊಡ್ತೀನಿ ಮರಿದಂಗೆ ... ।।
(M)ಯಾವ್ದೇ ಕಷ್ಟ ಬರದಂಗೆ
ನೋಡ್ಕೊತೀನಿ ಹೂವಿನಂಗೇ
ಕೇಳು ನಿಂಗೆ ಬೇಕಾದಂಗೆ
ತಂದಕೊಡ್ತೀನಿ ಮರಿದಂಗೆ ... ।।
ಏಸೋ ದಿನಾ ಕಂಡ ಕನಸೂ ಕೂಡಿ ಬಂದೈತೆ
ಹಾಲಿನಾಗೆ ಬೆಣ್ಣೆಯಂತೆ ಪ್ರೀತಿ ಬೆರೆತೈತೇ ...
ಪ್ರೀತಿ ಬೆರೆತೈತೇ...
(F) ಎಂದೂ ಕಾಣದ ಬೆಳಕ ಕಂಡೆ,
ಒಂದು ನಲ್ಮೆ ಹೃದಯ ಕಂಡೆ
ನಿನ್ನಿಂದ ಬಾಳ ಮಧುರರಾಗ ಇಂದೂ
ಮೂಡಿದೆ... ಎಂದೂ ಕಾಣದ ಬೆಳಕ ಕಂಡೆ
(M) ಎಂದೂ ಕಾಣದ ನಗೆಯಾ ಕಂಡೆ...



Авторы: C Aswath, Dadda Range Gawda


Внимание! Не стесняйтесь оставлять отзывы.