paroles de chanson Manasu Hela Bayaside - From "Beegara Pandya" - P. Susheela
ಮನಸು ಹೇಳ ಬಯಸಿದೆ ನೂರೊಂದು...
ತುಟಿಯ ಮೇಲೆ ಬಾರದಿದೆ ಮಾತೊಂದು...
ಮನಸು ಹೇಳ ಬಯಸಿದೆ ನೂರೊಂದು...
ತುಟಿಯ ಮೇಲೆ ಬಾರದಿದೆ ಮಾತೊಂದು...
ನೆನಪು ನೂರು ಎದೆಯಲಿ...
ಅಗಲಿಕೆಯ ನೋವಲಿ...
ವಿದಾಯ ಗೆಳೆಯನೇ...
ವಿದಾಯ ಗೆಳತಿಯೇ...
ವಿದಾಯ ಹೇಳ ಬಂದಿರುವೇ ನಾನಿಂದು...
ಮನಸು ಹೇಳ ಬಯಸಿದೆ ನೂರೊಂದು...
ತುಟಿಯ ಮೇಲೆ ಬಾರದಿದೆ ಮಾತೊಂದು...
ಹಗಲು ರಾತ್ರಿ ಹಕ್ಕಿ ಹಾಗೆ ಹಾರಿ ಮೆರೆದೆವು...
ನಗುವೆನ್ನುವ ಅಲೆಯ ಮೇಲೆ ತೇಲಿ ನಲಿದೆವು...
ಹಗಲು ರಾತ್ರಿ ಹಕ್ಕಿ ಹಾಗೆ ಹಾರಿ ಮೆರೆದೆವೂ...
ಊ...
ನಗುವೆನ್ನುವ ಅಲೆಯ ಮೇಲೆ ತೇಲಿ ನಲಿದೆವು...
ಹೃದಯಗಳಾ...
ಆ.
ಬೆಸುಗೆಯಾಗಿ.
ಸ್ನೇಹ ಬಂಧ.
ಆ.
ಅಮರವಾಗಿ.
ನಾಳೆ ಎನುವ ಚಿಂತೆ ಮರೆತು ಹಾಡಿ ಕುಣಿದೆವು.
ಆ ಕಾಲ ಕಳೆದಿದೆ...
ದೂರಾಗೋ ಸಮಯದೇ...
ವಿದಾಯ ಹೇಳ ಬಂದಿರುವೇ ನಾ ನೊಂದು...
ಮನಸು ಹೇಳ ಬಯಸಿದೆ ನೂರೊಂದು...
ತುಟಿಯ ಮೇಲೆ ಬಾರದಿದೆ ಮಾತೊಂದು...
ನೀನು ಬೇರೆ, ನಾನು ಬೇರೆ, ಹೇಗೋ ಬೆರೆತೆವು...
ನಮ್ಮ ನಮ್ಮ ಒಪ್ಪು ತಪ್ಪು ಎಲ್ಲಾ ಅರಿತೆವು...
ನೀನು ಬೇರೆ, ನಾನು ಬೇರೆ, ಹೇಗೋ ಬೆರೆತೆವು...
ಊ.
ನಮ್ಮ ನಮ್ಮ ಒಪ್ಪು ತಪ್ಪು ಎಲ್ಲಾ ಅರಿತೆವು.
ಈ ದಿನವಾ...
ಆ.
ಮರೆಯಬೇಡ.
ನಮ್ಮ ಸ್ನೇಹ.
ಆ.
ತೊರೆಯಬೇಡ.
ದಾರಿ ಬೇರೆ ಆದರೇನು ಪ್ರೀತಿ ಉಳಿಯಲಿ.
ನೀನೆಲ್ಲೇ ಇದ್ದರೂ...
ನೀ ಹೇಗೆ ಇದ್ದರೂ.
ನೀ ನಾಳೆ ಕೇಳಬೇಡ ನನ್ನ ಯಾರೆಂದು...
ಮನಸು ಹೇಳ ಬಯಸಿದೆ ನೂರೊಂದು...
ತುಟಿಯ ಮೇಲೆ ಬಾರದಿದೆ ಮಾತೊಂದು...
ನೆನಪು ನೂರು ಎದೆಯಲಿ, ಅಗಲಿಕೆಯ ನೋವಲಿ...
ವಿದಾಯ ಗೆಳೆಯನೇ, ವಿದಾಯ ಗೆಳತಿಯೇ...
ವಿದಾಯ ಹೇಳ ಬಂದಿರುವೇ ನಾನಿಂದು...
ಮನಸು ಹೇಳ ಬಯಸಿದೆ ನೂರೊಂದು...
ಊ.
ಹು.
ಹು.
ತುಟಿಯ ಮೇಲೆ ಬಾರದಿದೆ.
ಮಾತೊಂದು.

Attention! N'hésitez pas à laisser des commentaires.