Vijay Prakash feat. Anuradha Bhat - Beesuva Thangaali (From "Takkar") текст песни

Текст песни Beesuva Thangaali (From "Takkar") - Anuradha Bhat , Vijay Prakash



ಭಾರಿ ಖುಷಿ ಮಾರ್ರೆ ನಂಗೆ ನನ್ನ ಹೆಂಡ್ತಿನ್ ಕಂಡ್ರೆ
ಒಂದು ಚೂರು ಬಯ್ಯುದಿಲ್ಲ ರಾತ್ರಿ ಕುಡ್ಕ ಬಂದ್ರೆ
ಭಾರಿ ಖುಷಿ ಮಾರ್ರೆ ನಂಗೆ ನನ್ನ ಹೆಂಡ್ತಿನ್ ಕಂಡ್ರೆ
ಒಂದು ಚೂರು ಬಯ್ಯುದಿಲ್ಲ ರಾತ್ರಿ ಕುಡ್ಕ ಬಂದ್ರೆ
TV radio ಎಂಥ ಬ್ಯಾಡ ಅವಳು ಮನೆಗಿದ್ರೆ
ಅವಳು ಉಣ್ತೆ ಇಲ್ಲ ಕಾಣಿ ನಾನು ಊಟ ಮಾಡ್ದೆ
ನನ್ನಕಿಂತ ಚೂರು ದಪ್ಪ ಆರೂ ನಂಗೆ ಅಡ್ಡಿಲ್ಲೆ
ಅವಳು ಕಣ್ಣು ಬಿಟ್ರೆ ನಂಗೆ ಮಾತೆ ಬತ್ತಿಲ್ಲೆ
ಅವಳು ಸೀರಿ ಉಟ್ಕಬಂದು ಎದ್ರಿಗ್ನಿಂತ ಕೂಡ್ಲೇ ಮನ್ಸು ಹೇಳುತ್ತೊಂದು ಮಾತು
ಚೆಂದ ಚೆಂದ ಚೆಂದ ಚೆಂದ ನನ್ನ ಹೆಂಡ್ತಿ ಮೂಗಿನ್ ತುದೀಲಿ ಸ್ವಲ್ಪ ಸಿಟ್ಟ್ ಜಾಸ್ತಿ
ಚೆಂದ ಚೆಂದ ಚೆಂದ ಚೆಂದ ನನ್ನ ಹೆಂಡ್ತಿ ನನ್ನಂಥ ಗಂಡನಿಗೆ ಅವಳೇ ಆಸ್ತಿ
ಮನೆಯ ಬಾಗಿಲಲ್ಲಿ ಮನದಂಗಳದಲ್ಲಿ ರಂಗೋಲಿ ಇಡುವ ಕೈಯ ಹ್ಯಾಂಗೆ ಮರೆಯಲಿ
ಬೀಸೋ ಗಾಳಿ ತಾಗಿ ಮುಂಗುರುಳು ಕೆಳಗೆ ಇಳಿದು ಎಷ್ಟು ಚೆಂದ ಕಾಣುತಾಳೆ ಹ್ಯಾಂಗೆ ಹೇಳಲಿ
ಧರ್ಮಪತ್ನಿ ಧರ್ಮಕ್ಕೆ ಕಣ್ಣಿನಲ್ಲೇ ಬೈಯೋ ಮಾತು ನೋಡಿದಾಗ ನನ್ನ ಹೆಂಡ್ತಿ ಸ್ವಪ್ನ ಸುಂದರಿ
ಪೂರಾ ಮಾತು ಕೇಳಿ ಕೆಟ್ಟು ಬದುಕು ಡೊಂಬರಾಟ ಆದ್ರೂ ಸಾಯೋ ತನಕ ಹೆಗಲು ನೀಡೋ ವಿಶ್ವ ಸುಂದರಿ
ಎಷ್ಟೇ beauty ಎದುರು ಕಂಡ್ರು ನನ್ನ ಹೆಂಡ್ತಿನ್ ಕಂಡ ಮನ್ಸ ಹೇಳುತ್ತೊಂದು ಮಾತು
ಚೆಂದ ಚೆಂದ ಚೆಂದ ಚೆಂದನನ್ನ ಹೆಂಡ್ತಿ ಮೂಗಿನ ತುದೀಲಿ ಸ್ವಲ್ಪ ಸಿಟ್ಟ್ ಜಾಸ್ತಿ
ಚೆಂದ ಚೆಂದ ಚೆಂದ ಚೆಂದ ನನ್ನ ಹೆಂಡ್ತಿ ನನ್ನಂಥ ಗಂಡನಿಗೆ ಅವಳೇ ಆಸ್ತಿ
ಬಾರಿ ಖುಷಿ ಮಾರ್ರೆ ನಂಗೆ ನನ್ನ ಗಂಡ ಅಂದ್ರೆ
ಕೆನ್ನೆ ಕೆಂಪು ಆಕ್ತು ಕಾಣಿ ಅವ್ರು ಹತ್ರ ಬಂದ್ರೆ
ಚಿನ್ನ ಬೆಳ್ಳಿ ಎಂಥ ಬ್ಯಾಡ ಅವ್ರ ಪ್ರೀತಿ ಸಿಕ್ರೆ
ಎಲ್ಲ ಕಷ್ಟ ದೂರ ಆತು ಅವ್ರು ಒಮ್ಮೆ ನಕ್ರೆ
ನನ್ನಕಿಂತ ಮಾತು ಕಮ್ಮಿ ಆರೂ ನಂಗೆ ಅಡ್ಡಿಲ್ಲೆ
ಹೆಂಡ್ತಿ ಮಾತು ಕೇಂಬು ಗಂಡ ಸಿಕ್ರೆ ಸಾಕಲೇ
ಅವ್ರು ಪಂಚೆ ಎತ್ತಿ ಕಟ್ಟಿ ಕಣ್ಣುಹೊಡದ್ ಕೂಡ್ಲೇ ಮನ್ಸ ಹೇಳುತ್ತೊಂದು ಮಾತು
ಚೆಂದ ಚೆಂದ ಚೆಂದ ಚೆಂದ ನನ್ನ ಗಂಡ ಕಣ್ಣಿನಲ್ಲೇ ಸನ್ನೆ ಮಾಡಿ ಅಪ್ಪಿಕೊಂಡ
ಚೆಂದ ಚೆಂದ ಚೆಂದ ಚೆಂದ ನನ್ನ ಗಂಡ ಬೈದ್ರೂನು ಮತ್ತೆ ನನ್ನ ಒಪ್ಪಿಕೊಂಡ



Авторы: Nagendra Prasad V, Kadri Manikanth


Vijay Prakash feat. Anuradha Bhat - Melodic Hits Of Anuradha Bhat
Альбом Melodic Hits Of Anuradha Bhat
дата релиза
20-07-2020




Внимание! Не стесняйтесь оставлять отзывы.