B. Ajaneesh Loknath feat. Shreya Ghoshal - Neenire Saniha текст песни

Текст песни Neenire Saniha - Shreya Ghoshal , B Ajaneesh Loknath



ಒಂಥರಾ ನೀನೆ ರುವಾರಿ ಹೊಂಗನಸಿಗೆ
ಸಾಗಿದೆ ನಿನ್ನ ಸವಾರಿ ಮನಸಿಗೆ
ಅರಿಯದೇನೆ ನಿನ್ನಲೇ ಒಂದಾಗೋ ಸೂಚನೆ
ಅರೆರೆರೆ ನಾಚಿ ಹೂವ್ವಾಗಿ ಶಿಲೆಯಂತಾದೆನೆ
ಮುಗಿಲೇರಿ ನಿಂತ ಸೂರ್ಯ
ಕಂಡರೆ ಸುಡುವಂಥ ಭಾವ
ಮಳೆ ಬಿಲ್ಲಿಗೆ ರಂಗನು ಉಡಿಸಿಲ್ಲವೇ
ನಗುವ ಚಂದಿರನಲ್ಲಿ
ಕಲೆಯ ಕಾಣೊರೆ ಇಲ್ಲಿ
ಬೆಳದಿಂಗಳ ರಂಗವಲಿ ಬಲ್ಲರೇ
ನಿನಗೆ ಹೇಳಲೆಂದು
ಮಾತೊಂದೆ ಒಂದು
ನನ್ನಲ್ಲೇ ಉಳಿದಂತೆ
ರವಿಯ ದಾರಿ ಕಾಯೋ ಮಂಧಾರವೇ
ನನ್ನಾಸೆಯ ಅರಿತಂತೆ
ನೀನಿರೆ ಸನಿಹ ನೀನಿರೆ
ನಾಳೆಯ ಪರಿವೆ ಇಲ್ಲವೇ
ನೀನಿರೆ ಸನಿಹ ನೀನಿರೆ
ಹೇಳದ ಮಾತು ನೂರಿವೆ
ಹರಿವ ಝರಿಯಂತೆ ಜಾರೋ ನಿನ್ನ ಜೀವಕೆ
ಶರಧಿ ತೆರೆಯಂತೆ ನೀ ಬಂದರೇನೇ ಹೋಲಿಕೆ
ಮನಸ್ಸೇ
ನೀ ಬಹುಶ ಮನಸ ರಂಗೇರಿಸೋ ಯೋಜನೆಯೇ
ನಾಚಿರುವೆ ನವಿಲಂತೆ ಮರುಳಾಗಿ ಹೋದೆನೇ
ಮರೆತು ಮೈ ಮರೆತು
ನಸು ನಗುವೇ ಯಾರ ಪರಿವಿಲ್ಲದೆ ನಡುವೆಯೇ
ಅರೆರೆರೆ ನಾಚಿ ಹೂವ್ವಾಗಿ ಶಿಲೆಯಂತಾದೆನೇ
ಮುಗಿಲೇರಿ ನಿಂತ ಸೂರ್ಯ
ಕಂಡರೆ ಸುಡುವಂಥ ಭಾವ
ಮಳೆ ಬಿಲ್ಲಿಗೆ ರಂಗನು ಉಡಿಸಿಲ್ಲವೇ
ನಗುವ ಚಂದಿರನಲ್ಲಿ
ಕಲೆಯ ಕಾಣೊರೆ ಇಲ್ಲಿ
ಬೆಳದಿಂಗಳ ರಂಗವಲಿ ಬಲ್ಲರೇ
ನಿನಗೆ ಹೇಳಲೆಂದು
ಮಾತೊಂದೆ ಒಂದು
ನನ್ನಲ್ಲೇ ಉಳಿದಂತೆ
ರವಿಯ ದಾರಿ ಕಾಯೋ ಮಂಧಾರವೇ
ನನ್ನಾಸೆಯ ಅರಿತಂತೆ
ನೀನಿರೆ ಸನಿಹ ನೀನಿರೆ
ನಾಳೆಯ ಪರಿವೆ ಇಲ್ಲವೇ
ನೀನಿರೆ ಸನಿಹ ನೀನಿರೆ
ಹೇಳದ ಮಾತು ನೂರಿವೆ
(ನೀನಿರೆ ಸನಿಹ ನೀನಿರೆ
ನಾಳೆಯ ಪರಿವೆ ಇಲ್ಲವೇ
ನೀನಿರೆ ಸನಿಹ ನೀನಿರೆ
ಹೇಳದ ಮಾತು ನೂರಿವೆ)
ಹರಿವ ಝರಿಯಂತೆ ಜಾರೊ ನಿನ್ನ ಜೀವಕೆ
ಶರಧಿ ತೆರೆಯಂತೆ ನೀ ಬಂದರೇನೇ ಹೋಲಿಕೆ



Авторы: Kiran Kaverappa, Ajaneesh Loknath B


B. Ajaneesh Loknath feat. Shreya Ghoshal - Kirik Party (Original Motion Picture Soundtrack)
Альбом Kirik Party (Original Motion Picture Soundtrack)
дата релиза
20-01-2017



Внимание! Не стесняйтесь оставлять отзывы.