Amaal Mallik - Aalisu Baa текст песни

Текст песни Aalisu Baa - Armaan Malik



ಆಲಿಸು ಬಾ, ಆಲಿಸು ಬಾ ಮೌನಗಳ ರಾಗ
ಆಲಿಸುತಾ, ಆಲಿಸುತಾ ಎದೆಯಲಿ ಆನುರಾಗ
ಆಲಿಸು ಬಾ, ಆಲಿಸು ಬಾ ಮೌನಗಳ ರಾಗ
ಕಂಪಿನಲಿ ಕಂಪಿಸುವ ನಸುಕಿನ ಅನುರಾಗ
ಹಕ್ಕಿಯ ಕೊರಳಾ ಚಿವ್ ಚಿವ್ ರಾಗ
ತಂಗಾಳಿ ಅಲೆಯಾ ಸುಯ್ ಸುಯ್ ರಾಗ
ಹೂವು ಹಾಡೋ ಸುಗಂಧರಾಗ
ಕಣ್ಣು ನೋಡೋ ಆನಂಧರಾಗ
ಆಲಿಸು ಬಾ, ಆಲಿಸು ಬಾ ಮೌನಗಳ ರಾಗ
ಆಲಿಸುತಾ ಆಲೀಸುತಾ ಎದೆಯಲಿ ಅನುರಾಗ
ನಸುಕು ಅನ್ನೋದು ಬದುಕು ಮತ್ತೋಮ್ಮೆ ಅರಳುವ ಸೂಚನೇ
ಇರುಳು ಕಳೆದಂತೆ ರವಿಯಾ ಮಾಯೆಗೇ ವಂದನೇ
ಬೆಳಕುತಾ ಬಂದು ಕೋಳಕು ಮನಸನ್ನು ತೋಳೆಯಲಿ ಮೇಲ್ಲನೇ
ಸಕಲ ಜೀವಕ್ಕೂ ಒಳಿತೆ ಆಗೋದಕೆ ಪ್ರಾರ್ಥನೇ
ಉಸಿರಿನೋಳಗೆ ಜೀವಾರಾಗ
ಹೃದಯದೊಳಗೆ ಭಾವರಾಗ
ಪ್ರೀತಿ ಸುರಿಸೋ ಮಲ್ಹಾರ ರಾಗ
ಆಗಬೇಕು ಎಲ್ಲರ ರಾಗ
ಅಮ್ಮನ ಲಾಲಿಯೇ ಮೊತ್ತಮೊದಲ ರಾಗ
ಕಂದನ ಅಳುವಲೂ ಚಂದದೊಂದು ರಾಗ
ಮಾತೆಯಾ ಸ್ಮರಣೆಯೇ ಕೊನೆಯೇ ಇರದ ರಾಗ
ತಾಯಿಯಾ ಹರಕೆಯೇ ಜೀವಾ ಕಾಯೋ ರಾಗ
ಅವಳ ನಾಡಿ ಮಿಡಿವ ರಾಗ
ಅವಳ ಮಮತೆ ಚಿಮ್ಮೋರಾಗ
ಜನ್ಮಾ ನೀಡೋ ಜೀವಂತ ರಾಗ
ತಿದ್ದಿ ತೀಡೀ ಮುದ್ಧಾಡೋ ರಾಗ
ಆಲಿಸು ಬಾ ಆಲಿಸು ಬಾ ಮೌನಗಳ ರಾಗ
ಕಂಪಿನಲಿ ಕಂಪಿಸುವ ನಸುಕಿನ ಆನುರಾಗ
ಹಕ್ಕಿಯ ಕೊರಳಾ ಚಿವ್ ಚಿವ್ ರಾಗ
ತಂಗಾಳಿ ಅಲೆಯಾ ಸುಯ್ ಸುಯ್ ರಾಗ
ಹೂವು ಹಾಡೋ ಸುಗಂಧರಾಗ
ಕಣ್ಣು ನೋಡೋ ಆನಂಧರಾಗ



Авторы: Kaviraj Kaviraj, Arjun Janya


Amaal Mallik - Raaga (Original Motion Picture Soundtrack) - EP
Альбом Raaga (Original Motion Picture Soundtrack) - EP
дата релиза
20-03-2017




Внимание! Не стесняйтесь оставлять отзывы.