Mahalakshmi Ayyar - Yeko Yeno текст песни

Текст песни Yeko Yeno - Mahalakshmi Ayyar




ಏಕೋ ಏನೋ ನನ್ನಲ್ಲಿ ಹೊಸ ಆಸೆಯು ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
ನಿನ್ನ ನೋಟ ನಿನ್ನ ಆಟ ಏನೋ ಸಂತೋಷ
ನಿನ್ನ ಮಾತು ನಿನ್ನ ಪ್ರೀತಿ ಏನೋ ಉಲ್ಲಾಸ
ಏನೋ ದಾಹ ಏನೋ ಮೋಹ
ಏನೀ ಹೊಸಲೋಕ
ಏಕೋ ಏನೋ ನನ್ನಲ್ಲಿ ಹೊಸ ಆಸೆಯು ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
ಬಾಳಲಿ ಹೊಂಬೆಳಕಿನ ಹೊಸ ಭಾವನೆ ತಂದೆ
ನನ ಬದುಕಲಿ ಹೊಸ ಪ್ರೀತಿಯ ಕಂಡೆ ಕಂಡೆ (ಕಂಡೆ ಕಂಡೆ)
ಜೀವವ ಸಂತೈಸಲು ಉಸಿರಾಗಿ ನೀ ಬಂದಾಗ
ನನ ಜೀವನ ಹಸಿರಾಯಿತು ಇಂದೆ ಇಂದೆ (ಇಂದೆ ಇಂದೆ)
ಕಣ್ಣೋಟ ಬೆರೆತಾಗ ನೀನಿಂತೆ ಮನದಲ್ಲಿ
ತುಟಿಯಲ್ಲಿ ನಗೆಯೊಂದ ಚೆಲ್ಲಿ ಚೆಲ್ಲಿ (ಚೆಲ್ಲಿ ಚೆಲ್ಲಿ)
ಮೌನ ಮಾತಾಗಿದೆ ಮಾತೆಲ್ಲಾ ಹಾಡಾಗಿದೆ
ಇಂಪಾದ ಹಾಡಲ್ಲಿ ನಾ ತೇಲಿ ಹೋದೆ
ಏಕೋ ಏನೋ ನನ್ನಲ್ಲಿ ಹೊಸ ಆಸೆಯು ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
ಚಂದ್ರನು ಬಾನಿಂದಲಿ ನನಗಾಗಿಯೇ ಬಂದ
ಮನ ತಂಪಾಗಲು ತಂಗಾಳಿಯ ತಂದ ತಂದ (ತಂದ ತಂದ)
ಅಪರೂಪದ ಅನುರಾಗದ ಆನಂದವು ನೀನಾದೆ
ನನ ಜೊತೆಯಾಗಲು ಮಿಂಚಂತೆ ನೀ ಬಂದೆ ಬಂದೆ (ಬಂದೆ ಬಂದೆ)
ನಲಿದಾಡಿತು ಮನಸು ಹೊಸಲೋಕ ಕಂಡಂತೆ
ನಿನಗಿಂದು ನಾ ಸೋತು ಹೋದೆ
ಸ್ನೇಹ ಎಲ್ಲಾಯ್ತೋ ಪ್ರೀತಿ ಹೇಗಾಯ್ತೋ
ನಿನ್ನಲ್ಲಿ ನನ್ನನ್ನು ನಾ ಮರೆತು ಹೋದೆ
ಏಕೋ ಏನೋ ನನ್ನಲ್ಲಿ ಹೊಸ ಆಸೆಯು ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ
ನಿನ್ನ ನೋಟ ನಿನ್ನ ಆಟ ಏನೋ ಸಂತೋಷ
ನಿನ್ನ ಮಾತು ನಿನ್ನ ಪ್ರೀತಿ ಏನೋ ಉಲ್ಲಾಸ
ಏನೋ ದಾಹ ಏನೋ ಮೋಹ
ಏನೀ ಹೊಸಲೋಕ
ಏಕೋ ಏನೋ ನನ್ನಲ್ಲಿ ಹೊಸ ಆಸೆಯು ಮೂಡುತಿದೆ
ಏಕೋ ಏನೋ ಮನಸಲ್ಲಿ ಹೊಸ ಬಯಕೆಯು ಕಾಡುತಿದೆ



Авторы: S.p. Balasubrahmanyam, Chi Udayashanker




Внимание! Не стесняйтесь оставлять отзывы.