Shreya Ghoshal feat. Karthik - Cheluve Brahmana Bali текст песни

Текст песни Cheluve Brahmana Bali - Shreya Ghoshal , Karthik




ಲಲಲ ಲಾಲ ಲಾಲಾ ಲಾಲಾಲ
ಲಾಲಾ ಲಾಲ ಲಾ ಲಾಲಾಲ
ಚೆಲುವೆ ಬ್ರಹ್ಮನ ಬಳಿ ಮನವಿಯೊಂದ ಹೇಳಿದೆ
ನಿನ್ನ ಸಂಗಾತಿಯಾಗ ಬಯಸಿದೆ
ಹಲವು ವರುಷಗಳೇ ಕಾಯಬೇಕು ಎಂದನು
ಉಸಿರಿರೋವರೆಗೂ ನಾನು ಕಾಯುವೆನು ಎಂದೇನು
ನನ್ನಾಸೆ ನೆರವೇರುವುದ ...ಆ
ನೀ ಹೇಳೇ ನಿಜವಾಗುವುದ
ಫಲಿಸೆ ಫಲಿಸೆ ನಾ ಕೂಡ ಪ್ರಾರ್ಥಿಸೆ .
ಚೆಲುವೆ ಬ್ರಹ್ಮನ ಬಳಿ ಮನವಿಯೊಂದ ಹೇಳಿದೆ
ನಿನ್ನ ಸಂಗಾತಿಯಾಗ ಬಯಸಿದೆ
ಎದೆಯ ಗರ್ಭದಲಿ ಪ್ರೀತಿಯ ಹೊತ್ತಿರಲು
ನಾನು ತಾಯಿಯಂತೆಯೇ
ನೀನು ಮಗುವಿನಂತೆಯೇ
ಮರುಭೂಮಿಯಂತೆ ನಾನು ಮುಂಗಾರೆ ಆದೆ ನೀನು
ನನ್ನ ಪ್ರೀತಿ ಬಳ್ಳಿ ಚಿಗುರಿ ಅರಳಲು
ನೀನು ಕಣ್ಣು ತೆರೆದಿರಲು
ಬೆಳಕಿಗೂ ಬಳುವಳಿಯೇ
ಮನದಲಿ ನೀನಿರಲು
ಪ್ರೀತಿಯ ಚಳುವಳಿಯೇ
ಗೆಳತಿಯೇ ... ನೀ ಸಿಗುವೆಯ
ಸಿಗುವೆ ಸಿಗುವೆ ನಿನ್ನೊಳೆ ಅಲ್ಲವೇ
ಚೆಲುವೆ ಬ್ರಹ್ಮನ ಬಳಿ ಮನವಿಯೊಂದ ಹೇಳಿದೆ
ನಿನ್ನ ಸಂಗಾತಿಯಾಗ ಬಯಸಿದೆ
ಏಕೆ ಜನಿಸಿದೆ ನಾ ಏಕೆ ಬದುಕಿಹೆ ನಾ
ಉಸಿರೇ ಈಗ ಅರಿತೆನಾ .
ನೀನೆ ಅದಕೆ ಕಾರಣ
ಲೋಕ ಯಾವುದೆಂದು
ಪ್ರೀತಿ ಏನಿದೆಂದು
ನಿನ್ನ ಕಂಡ ಮೇಲೆ ತಿಳಿದು ಕೊಂಡೆ ನಾ
ಸದ್ದು ಮಾಡದೆ ನೇ ದಿನ
ಸುದ್ದಿ ಮಾಡೋ ಪ್ರೀತಿ ಇದು
ಮುದ್ದು ಮುದ್ದು ಮಾತಿನಲಿ
ಗೆದ್ದು ಕೊಂಡ ಪ್ರೀತಿ ಇದು
ಜೊತೆಯಲಿ ... ನೀ ಇರುವೆಯ
ಇರುವೆ ಇರುವೆ ನಿನ್ನೋಳೆ ಅಲ್ಲವೇ
ಚೆಲುವೆ ಬ್ರಹ್ಮನ ಬಳಿ ಮನವಿಯೊಂದ ಹೇಳಿದೆ
ನಿನ್ನ ಸಂಗಾತಿಯಾಗ ಬಯಸಿದೆ
ಹಲವು ವರುಷಗಳೇ ಕಾಯಬೇಕು ಎಂದನು
ಉಸಿರಿರೋವರೆಗೂ ನಾನು ಕಾಯುವೆನು ಎಂದೇನು
ನನ್ನಾಸೆ ನೆರವೇರುವುದ ...ಆ
ನೀ ಹೇಳೇ ನಿಜವಾಗುವುದ
ಫಲಿಸೆ ಫಲಿಸೆ ನಾ ಕೂಡ ಪ್ರಾರ್ಥಿಸೆ .
ಲಲಲ ಲಾಲ ಲಾಲಾ ಲಾಲಾಲ
ಲಾಲಾ ಲಾಲ ಲಾ ಲಾ
ಲಲಲ ಲಾಲ ಲಾಲಾ ಲಾಲಾಲ
ಲಾಲಾ ಲಾಲ ಲಾ ಲಾ
--------------------ವಿರೇಶ್ ಬಡಿಗೇರ ತಿಗರಿ



Авторы: K. Ramanarayan, Sadhu Kokila


Shreya Ghoshal feat. Karthik - Jaji Mallige (Original Motion Picture Soundtrack)
Альбом Jaji Mallige (Original Motion Picture Soundtrack)
дата релиза
03-02-2009



Внимание! Не стесняйтесь оставлять отзывы.
//}